ತಿರುವಳ್ಳುವರ್
	ಸು. 300-400. ತಮಿಳು ಸಾಹಿತ್ಯದಲ್ಲಿ ಶ್ರೇಷ್ಠ ನೀತಿಗ್ರಂಥವೆನಿಸಿದ ತಿರುಕ್ಕು¾ಳನ್ನು ಬರೆದ ಕವಿ.  ಈ ಗ್ರಂಥವನ್ನು ಜನ ತಮಿಳು ವೇದವೆಂದು ಭಕ್ತಿಗೌರವಗಳಿಂದ ಕೊಂಡಾಡುತ್ತಾರೆ.  ತಮಿಳು ಜನರ ವ್ಯವಹಾರ, ನೀತಿಧರ್ಮ, ನಾಗರಿಕತೆ  ಇವನ್ನು ರೂಪಿಸುವಲ್ಲಿ ಈ ಗ್ರಂಥದ ಪ್ರಭಾವ ಅಪಾರವಾದದ್ದು.  ಕು¾ಳನ್ನು ಅರಿಯದ ತಮಿಳನಿಲ್ಲ ಎನ್ನಬಹುದು.  ಈ ಗ್ರಂಥ ಪ್ರಪಂಚದ ನಾನಾ ಭಾಷೆಗಳಿಗೆ ಅನುವಾದವಾಗಿದೆ. 

	ತಿರು ಗೌರವಾರ್ಥಕ ಪದ ; ಶ್ರೀ ಎಂಬುದರ ತದ್ಭವ.  ವಳ್ಳುವರ್ ಜಾತಿವಾಚಕ ಪದ ; ಒಂದು ಅಂತ್ಯಜ ಜಾತಿಯನ್ನು ಸೂಚಿಸುತ್ತದೆ.  ಈ ರೀತಿಯ ಜಾತಿವಾಚಕ ಪದ ಯಾವ ವ್ಯಕ್ತಿಯ ಹೆಸರೂ ಆಗಿರಲಾರದು.  ಆದರೆ ಅದರ ಹೊರತು ಕ¾ಳ್ ಕವಿಗೆ ಬೇರೆ ಹೆಸರು ಯಾವುದೂ ಉಳಿದು ಬಂದಿಲ್ಲ.  ಕವಿಯ ಹೆಸರು ಕು ಜಾತಿ ಮತ ಊರು ಕೇರಿಗಳ ವಿಷಯವಾಗಿ ಗ್ರಂಥದಲ್ಲಿ  ಯಾವೊಂದು ಸೂಚನೆಯೂ ಇಲ್ಲ.  ಈತನ ಹುಟ್ಟಿನ ವಿಷಯದಲ್ಲಿ ಸರ್ವಜ್ಞನ ವಿಷಯದಲ್ಲಿರುವಂತೆಯೇ ಒಂದು ಕತೆಯಿದೆ.  ಭಗವನ್ ಎಂಬ ಬ್ರಾಹ್ಮಣನಿಗೂ ಆದಿ ಎಂಬ ಹೊಲತಿಗೂ ಪ್ರೇಮವುಂಟಾಯಿತು.  ಭಗವನ್ ಸದಾ ದೇಶಸಂಚಾರದಲ್ಲಿರುವವನು.  ಹುಟ್ಟಿದ ಮಗುವನ್ನು ತಾವು ಎಲ್ಲಿದ್ದರಲ್ಲಿ ತೊರೆದು ಹೋಗಬೇಕೆಂದು ಒಪ್ಪಂದ ಮಾಡಿಕೊಂಡು ಇಬ್ಬರೂ ಮದುವೆಯಾದರು.  ಆ ದಂಪತಿಗಳಿಗೆ ಜನಿಸಿದವನೇ ತಿರುವಳ್ಳುವರ್ .  ಅವ್ವೈಯಾರ್ ಮುಂತಾದ ಇನ್ನೂ ಕೆಲವು ಮಹಾ ವ್ಯಕ್ತಿಗಳೂ ಇವರ ಮಕ್ಕಳೇ.  ಬೇರೆ ಬೇರೆಯವರಿಂದ ಪೋಷಿತರಾದ ಇವರು ಆ ಪೋಷಕರ ಜಾತಿಮತಗಳಿಗೇ ಸೇರಿದವರೆಂದು ಹೆಸರಾದರು.  ಈ ಕತೆಯಲ್ಲಿ ಸತ್ಯಾಂಶ ಎಷ್ಟಿದೆಯೋ ಹೇಳುವುದು ಕಷ್ಟ. 

	ಈ ಕವಿ ಯಾವ ಜಾತಿಗೆ ಸೇರಿದವನೆಂದು ನಿಖರವಾಗಿ ತಿಳಿದಿಲ್ಲ.  ಈತ ಶೈವನೆಂದು ಸಂಪ್ರದಾಯದ ನಂಬಿಕೆ.  ಆದರೆ ಈತನನ್ನು ವೈಷ್ಣವನೆಂದೂ ಜೈನನೆಂದೂ ಬೌದ್ಧನೆಂದೂ ಆಯಾಯ ಜಾತಿಯವರು ಹೇಳಿಕೊಳ್ಳುವುದುಂಟು. 

	ಸಂಗಂ ಕಾವ್ಯಗಳೆಂದೂ ಪರಿಗಣಿತವಾದ ಎಟ್ಟುತ್ತೊಗೈ, ಪತ್ತುಪಾಟ್ಟು ಗ್ರಂಥಗಳ ಅನಂತÀರ ತಿರುಕ್ಕುó¾ಳ್ ರಚಿತವಾಗಿರಬೇಕೆಂದು ವಿದ್ವಾಂಸರನೇಕರ ಅಭಿಪ್ರಾಯ.  ಈ ಗ್ರಂಥದಲ್ಲಿ ಧರ್ಮ ಅರ್ಥ ಕಾಮಗಳನ್ನು ಕುರಿತ- ಅ¾ಮ್, ಪೊರುಳ್, ಇನ್ಬಮ್ ಎಮಬ ಮೂರು ಭಾಗಗಳಿವೆ.  ಆದ್ದರಿಂದ ಇದಕ್ಕೆ ಮುಪ್ಪಾಲ್- ಎಂದರೆ ಮೂರು ಭಾಗಗಳುಳ್ಳದ್ದು, ತ್ರಿವರ್ಗ, ಎಂಬ ಹೆಸರು ಬಂದಿದೆ.  ಮೋಕ್ಷ ಅನುಭವೈಕವೇದ್ಯವೂ ಅನಿರ್ವಚನೀಯವೂ ಆದ್ದರಿಂದ ಆ ಭಾಗವನ್ನು ಗ್ರಂಥದಲ್ಲಿ ವಿವರಿಸಿಲ್ಲವೆಂದು ಆ ಭಾಗವನ್ನು ಬಿಟ್ಟಿರುವುದಕ್ಕೆ ಕಾರಣವನ್ನು ಹೇಳುವುದುಂಟು. 

	ಇದರಲ್ಲಿ ಹತ್ತು ಹತ್ತು ಪದ್ಯಗಳಿಂದ ಕೂಡಿದ 133 ಅಧಿಕಾರಗಳಿವೆ. ಮೊದಲನೆಯ ಅ¾ತ್ತುಪ್ಪಾಲ್‍ನಲ್ಲಿ (ಧರ್ಮಾಭಾಗ) 38; ಎರಡನೆಯ ಪೊರುಳ್ ಪಾಲ್‍ನಲ್ಲಿ (ಅರ್ಥಭಾಗ) 70 ; ಮೂರನೆಯ ಕಾಮತ್ತುಪ್ಪಾಲ್‍ನಲ್ಲಿ (ಕಾಮಭಾಗ) 25 ಅಧಿಕಾರಗಳಿದ್ದು, ಒಟ್ಟು 1,330 ಪದ್ಯಗಳಿವೆ. 

	ಕು¾ಳ್ ಎಂಬುದು ಗ್ರಂಥದಲ್ಲಿ ಬಳಸಿರುವ ಕುಛಿಳ್ ವೆಣ್ಣಾ ಎಂಬ ಛಂದಸ್ಸಿನ ಸಂಕ್ಷಿಪ್ತ ನಾಮ.  ಕು¾ಳ್ ಎಂದರೆ ಚಿಕ್ಕದು ಎಂದರ್ಥ; ಚುಟಕ, ಗುಜ್ಜಾರಿ, ವಾಮನ, ಎಂದ ಹಾಗೆ, ದ್ರಾವಿಡ ಛಂದೋಜಾತಿಯಲ್ಲೆಲ್ಲ ಈ ಛಂದಸ್ಸೇ ಅತ್ಯಂತ ಚಿಕ್ಕದು; ಕೇವಲ ಒಂದೂವರೆ ಸಾಲಿನ ಪದ್ಯ; ಕನ್ನಡ ತ್ರಿಪದಿಯ ಅರ್ಧದಷ್ಟು.  ಇಷ್ಟು ಅಲ್ಪಮಿತಿಯ ಪದ್ಯವಾದರೂ ಅರ್ಥದ ಆಳ, ವಸ್ತುವಿನ ವಿಸ್ತಾರ, ಭಾವದ ಔನ್ನತ್ಯ- ಇವುಗಳಲ್ಲಿ ಈ ಗ್ರಂಥ ಎಣೆಯಿಲ್ಲದ್ದಾಗಿದೆ. 

	ಅ¾ತ್ತುಪ್ಪಾಲಿನಲ್ಲಿ ಗೃಹಸ್ಥ, ಸಂನ್ಯಾಸ, ವಿಧಿ ಮುಂತಾದವನ್ನು ಕುರಿತು ಹೇಳಲಾಗಿದೆ.  ಈ ಅಧಿಕಾರದಲ್ಲಿ ಧರ್ಮಕ್ಕೆ ತಿರುವಳ್ಳುವರ್ ಕೊಟ್ಟಿರುವ ವಿವರಣೆ ಶ್ರೇಷ್ಠವಾದುದಾಗಿದೆ.  ಮನಸ್ಸಿನಲ್ಲಿ ಕಳಂಕ ಇಲ್ಲದಿರುವುದೇ ಧರ್ಮ; ಧರ್ಮದ ಮೂಲಕ ಯಾವುದು ಬರುತ್ತದೋ ಅದೇ ನಿಜವಾದ ಆನಂದ ; ಉಳಿದವೆಲ್ಲವೂ ಈ ಆನಂದದಿಂದ ಹೊರತಾದವು ಎಂದಿದ್ದಾನೆ. 

	ಪೊರುಳ್ ಪಾಲ್‍ನಲ್ಲಿ ರಾಜರಿಗೂ ಸಮಾಜಕ್ಕೂ ಇರುವ ಸಂಬಂಧವನ್ನು ವಿವರಿಸಿದ್ದಾನೆ.  ಜಯ ತರುವುದು ಈಟಿಯಲ್ಲ; ಅರಸನ ನಿಷ್ಪಕ್ಷವಾದ ಆಡಳಿತ, ಎಲ್ಲ ಮಾನವರೂ ಹುಟ್ಟಿನಿಂದ ಒಂದೇ. ವೃತ್ತಿ ಆತನ ಶ್ರೇಷ್ಠತೆ ಅವನ ಕನಿಷ್ಠತೆಯನ್ನು  ಹೇಳಲಾರದು.  ಎಂದಿದ್ದಾನೆ.  ಈ ಮಾತು ಚತುರ್ವರ್ಣಪದ್ಧತಿಗೆ ವಿರೋಧವಾಗಿದೆ. 

	ಕಾಮತ್ತುಪ್ಪಾಲ್‍ನಲ್ಲಿ ವಿವಾಹಪೂರ್ಣ ಪ್ರೇಮ ಮತ್ತು ವಿವಾಹಾನಂತರದ ದಾಂಪತ್ಯ ಸಂಬಂಧಗಳನ್ನು ವಿವೇಚಿಸಲಾಗಿದೆ.  ನಾಯಕ ನಾಯಿಕೆಯ ವರ್ಣನೆ ಮಾಡುವಾಗ ಅವಳ ಕಣ್ಣುಗಳಲ್ಲಿ ಎರಡು ನೋಟಗಳಿವೆ ; ಒಂದು ನೋವನ್ನುಂಟು ಮಾಡುವುದು ಮತ್ತೊಂದು ಆ ನೋವಿಗೆ ಮದ್ದನ್ನೀಯುವುದು ಎನ್ನುತ್ತಾನೆ. 

	ಮಹಾವಿಷ್ಣು ಕು¾ಳಾಗಿ ಎಂದರೆ ವಾಮನವಾಗಿ ಬಂದು ತನ್ನ ಎರಡಡಿಗಳಿಂದ ಲೋಕವನ್ನೆಲ್ಲ ಪೂರ್ತಿಯಾಗಿ ಅಳೆದ ಹಾಗೆ, ಸತ್ಯಜ್ಞಾನಿ ತಿರುವಳ್ಳುವರ್ ತನ್ನ ಕು¾ಳ್ ವೆಣ್ಣಾ ಅಡಿಗಳಿಂದ ಲೋಕದ ಜನ ಮನಸ್ಸಿನಲ್ಲಿ ಭಾವಿಸುವ ಭಾವಗಳನ್ನೆಲ್ಲ ಅಳೆದಿದ್ದಾನೆ ಎಂದು ಪುರಾತನ ವಿಮರ್ಶಕ ಪರಣರ್ ಹೇಳಿದ್ದಾನೆ.  ಸಾಸಿವೆಯನ್ನು ಕೊರೆದು ಅದರೊಳಗೆ ಸಪ್ತಸಾಗರಗಳನ್ನು ನುಗ್ಗಿಸಿ ಅಡಗಿಸಿದ ಹಾಗೆ ಒಂದೊಂದು ಕು¾ಳ್ ಪದ್ಯದಲ್ಲಿಯೂ ತಿರುವಳ್ಳುವರ್ ಭಾವಪ್ರಪಂಚವನ್ನೇ ಗಿಡಿದು ತುಂಬಿಟ್ಟಿದ್ದಾನೆ ಎಂಬುದು ಇನ್ನೊಬ್ಬ ವಿಮರ್ಶಕನ ಅಭಿಪ್ರಾಯ. 

	ಈತನ ಹಿರಿಮೆಯನ್ನು ಗಣಿಸಿದ ಆಧುನಿಕ ತಮಿಳು ಕವಿ ಭಾರತಿ ವಳ್ಳವನನ್ನು ಈ ಪ್ರಪಂಚಕ್ಕಿತ್ತು.  ಮಹತ್ತಾದ ಕೀರ್ತಿಯನ್ನು ಪಡೆಯಿತು ತಮಿಳುನಾಡು ಎಂದಿದ್ದಾರೆ.  ಕನ್ನಡದಲ್ಲಿ ಮೊದಲಿಗೆ ರಾ. ನರಸಿಂಹಚಾರ್ಯರು ಇದರ 38 ಅಧಿಕಾರಗಳನ್ನು ಅನುವಾದಿಸಿ ತಮ್ಮ ನೀತಿ ಮಂಜರಿಯ ಎರಡನೆಯ ಭಾಗದಲ್ಲಿ ಪ್ರಕಟಿಸಿದರು.  ಅನಂತರ ಈ ಗ್ರಂಥದ ಮೊದಲ ಭಾಗವಾದ ಧರ್ಮಭಾಗವನ್ನು ಎಲ್, ಗುಂಡಪ್ಪನವರು ಕನ್ನಡಕ್ಕೆ ಅನುವಾದ ಮಾಡಿ ಇದರಲ್ಲಿ ತಮಿಳು ಮೂಲ ಹೊಸಗನ್ನಡ ಅನುವಾದ ಮತ್ತು ತಿಳಿಗನ್ನಡದಲ್ಲಿ ಅರ್ಥ ವಿವರಣೆಗಳನ್ನು ಕೊಟ್ಟಿದ್ದಾರೆ.  ಅವರ ಗ್ರಂಥದಿಂದ ಕೆಲವು ದಪ್ಯಗಳನ್ನು ಇಲ್ಲಿ ಉದಾರಿಸಲಾಗಿದೆ. 

		ಮಕ್ಕಳ ತೊದಲು ಮಾತಿಗಿಂತ ಇಂಪು ಇಲ್ಲ ಎನ್ನುವುದಕ್ಕೆ
	   ತ. ಕು¿ಲಿನಿದಿಯಾ¿õÉನಿದೆನ್ಬರ್ ತಮ್ ಮಕ್ಕಣ್
		ಮ¿ಲೈಚ್ಚೊ¾õÉ್ಕೀಳಾದವರ್
	   ಕ. ಕೊಳಲಿನಿದು ವೀಣೆಯಿನಿದೆನ್ನುವರು
		ತಮ್ಮ ಮಕ್ಕಳ ತೊದಲ್ನುಡಿಯ ಕೇಳದವರು
		ಆಸೆ ವಂಚಿಸುತ್ತದೆ; ಅದಕ್ಕೆ ಅಂಜಿ ನಡೆಯಬೇಕು ಎನ್ನುವುದಕ್ಕೆ
	   ತ. ಆಞ್ಜವದೋರುವ¾ನೇ ಯೊರುವನೈ	
		ವಞÂ್ಜಪ್ಪದೋರುಮವಾ
	   ಕ.  ಅಂಜುವದೇ ಧರ್ಮ ಒಬ್ಬನನು
		ವಂಚಿಸುವುದೇ ಆಸೆ
		ಸತ್ಯವಂತನನ್ನು ಲೋಕವೆಲ್ಲ ನೆನೆಯುತ್ತದೆ ಎನ್ನುವುದಕ್ಕೆ
	   ತ. ಉಳ್ಳುತ್ತಾ ¾õÉ್ಪೂಯುಆದೊ ¿ಗಿ ನುಲಗತ್ತಾ 
		ರುಳ್ವತ್ತುಳೆಲ್ಲಾಮುಳನ್
	   ಕ. ಮನದಲ್ಲಿ ಹುಸಿಯೆದೆಯ ನಡೆವನಾದರೆ 
			ಅವನು
		ಲೋಕದವರೆಲ್ಲರ ಮನದಲ್ಲಿ ನೆಲಸಿರುವನು. 
	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
								(ಬಿ.ಎಸ್.; ಎನ್.ಕೆ.ಎಸ್.ಆರ್.)